
ಪ್ರೇಮದ ಊರಲಿ ಚಿತ್ರವು 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಸೆಲೆಬ್ರೇಷನ್ ಮಾಡಿದೆ. ಈ ಸಂದರ್ಭದಲ್ಲಿ ನಾಯಕ ನಟ ಶ್ರೀರಾಮ್, ಕನ್ನಡ ನಟರ ಕುರಿತು ತಾವು ನೀಡಿದ ಹೇಳಿಕೆಗಳ ಬಗ್ಗೆ ಎದ್ದಿರುವ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ಅದು ವಿವಾದ ಅನ್ನೋದು ತಪ್ಪು. ನಾನು ಆ ಸಂದರ್ಭದಲ್ಲಿ ನನ್ನ ಬಗ್ಗೆ ಮತ್ತು ನನ್ನ ಚಿತ್ರ ಪ್ರೇಮದ ಊರಲಿ ಬಗ್ಗೆ ಮಾತ್ರ ಮಾತನಾಡಿದ್ದೆ’ ಎಂದು ಶ್ರೀರಾಮ್ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟರು ತಮ್ಮ ಸಿನಿಮಾಗೆ ಬೆಂಬಲ ನೀಡಿದ್ದಾರೆ ಎಂಬುದನ್ನು ಅವರು ಸ್ಮರಿಸಿದರು. ಜಗ್ಗೇಶ್, ಯಶ್, ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಸೇರಿದಂತೆ ಎಲ್ಲ ಸ್ಟಾರ್ ನಟರನ್ನು ಗೌರವದಿಂದ ಕಾಣೋದಾಗಿ ಹೇಳಿದ್ದಾರೆ.
‘ನಾನು ನಮ್ಮ ಮನೆಯವರ ಬಗ್ಗೆ ಯಾವತ್ತೂ ತಪ್ಪಾಗಿ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ. ಅವರಿಂದ ಕಲಿತು, ಅವರ ಹೆಜ್ಜೆಗಳನ್ನು ನೋಡಿ ಬೆಳೆಯುತ್ತಿರುವ ಹುಡುಗ ನಾನು’ ಎಂದು ಶ್ರೀರಾಮ್ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
