Hashtagintro

ಬಿಗ್​​ಬಾಸ್ ಮನೆಯಲ್ಲಿ ಲವ್, ಸ್ಪರ್ಧಿಯ ವಾಪಸ್ ಕರೆದೊಯ್ಯಲು ಬಂದ ಪೋಷಕರು

ಬಿಗ್​​ಬಾಸ್ ಮನೆಯಲ್ಲಿ ಲವ್, ಸ್ಪರ್ಧಿಯ ವಾಪಸ್ ಕರೆದೊಯ್ಯಲು ಬಂದ ಪೋಷಕರು

ಬಿಗ್​​ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಸಾಮಾನ್ಯ. ಕೆಲವು ಸ್ಪರ್ಧಿಗಳು ಪರಸ್ಪರ ಬಲು ಕ್ಲೋಸ್ ಆಗುತ್ತಾರೆ. ಪರಸ್ಪರ ಫ್ಲರ್ಟ್ ಮಾಡುವುದು ಮಾಡುತ್ತಾರೆ. ಕನ್ನಡ ಬಿಗ್​​ಬಸ್​​​ನಲ್ಲಿ ಕೆಲ ಜೋಡಿಗಳು ಪರಸ್ಪರ ಪ್ರೀತಿಸಿ ಆ ಪ್ರೀತಿಯನ್ನು ಶೋ ಮುಗಿದ ಮೇಲೂ ಮುಂದುವರೆಸಿದ್ದು ಇದೆ. ಆದರೆ ಮಲಯಾಳಂ ಬಿಗ್​​ಬಾಸ್​​ನಲ್ಲಿ ಸ್ಪರ್ಧಿಯೊಬ್ಬರು ತನ್ನ ಸಹಸ್ಪರ್ಧಿಯ ಮೇಲೆ ತಮಗೆ ಪ್ರೀತಿ ಶುರುವಾಗಿದೆ ಎಂದು ಹೇಳಿದ್ದಾರೆ. ಅದನ್ನು ನೋಡಿದ ಪೋಷಕರು ತಮ್ಮ ಮಗಳನ್ನು ಶೋನಿಂದ ಹೊರಗೆ ಕರೆದುಕೊಂಡು ಹೋಗಲು ಬಿಗ್​​ಬಾಸ್ ವೇದಿಕೆಗೆ ಬಂದಿದ್ದಾರೆ.

ಬಿಗ್ ಬಾಸ್ ಮಲಯಾಳಂ 8ರ ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ಪರ್ಧಿಯೊಬ್ಬರ ಪೋಷಕರು ಫ್ಯಾಮಿಲಿ ವೀಕ್ ಸಮಯದಲ್ಲಿ ಅಲ್ಲದೆ, ವೀಕೆಂಡ್ ಸಂಚಿಕೆಯಲ್ಲಿ ನೇರವಾಗಿ ಶೋ ಒಳಗೆ ಪ್ರವೇಶಿಸಿದ್ದಾರೆ. ಅಲ್ಲದೆ ತಮ್ಮ ಮಗಳನ್ನು ವಾಪಸ್ ಮನೆಗೆ ಕರೆದೊಯ್ಯುವ ವಿನಂತಿ ಮಾಡಿದ್ದಾರೆ. ನಿರೂಪಕ ಮೋಹನ್‌ಲಾಲ್ ಅವರು ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರನ್ನು ವೇದಿಕೆಗೆ ಸ್ವಾಗತಿಸಿದ್ದಾರೆ. ವೀಡಿಯೊದಲ್ಲಿ ಕಣ್ಣೀರು ಹಾಕುತ್ತಿರುವ ನೇಹಾ ಅವರ ಪೋಷಕರು, ನೇಹಾ ಮನೆಯೊಳಗೆ ಏನು ಮಾಡುತ್ತಿದ್ದಾಳೆ? ಎಂದು ಮೋಹನ್​​ಲಾಲ್ ಅವರನ್ನು ಪ್ರಶ್ನಿಸಿದ್ದಾರೆ.

ನೇಹಾ ಬಳಿ ಮಾತನಾಡಿರುವ ಪೋಷಕರು ‘ನೇಹಾ, ನಾವಿಬ್ಬರೂ ನೆನಪಿದ್ದೀವಾ? ನೀನು ನಮ್ಮನ್ನು ಮರೆತಿರುವೆ ಎಂದೇ ನನಗನಿಸುತ್ತದೆ’ ಎಂದು ನೇಹಾಳ ತಂದೆ ಪ್ರಶ್ನಿಸುತ್ತಾರೆ. ಮುಂದುವರಿದು ವೀಡಿಯೊದಲ್ಲಿ, ಬೇಡ ಎಂದು ಹೇಳಿದರೂ ನೇಹಾ ಆಟವನ್ನು ಮುಂದುವರಿಸಿದ್ದಾಳೆ ಎಂದು ಅವಳ ತಾಯಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಕಣ್ಣೀರು ಹಾಕುತ್ತಾ ನೇಹಾ ತಾಯಿ, ‘ಎಲ್ಲರೂ ಆಟವಾಡುತ್ತಿದ್ದಾರೆ. ಆದರೆ ನೀನು ಭಾವನೆಗಳಿಗೆ ಸಿಲುಕಿಕೊಳ್ಳುತ್ತಿರುವೆ. ನಿನ್ನನ್ನು ಬಳಸಿಕೊಳ್ಳಲಾಗುತ್ತಿದೆ. ಬೇಡವೆಂದು ನಾವು ಹೇಳಿದ ಆಟವನ್ನೇ ನೀನು ಆಡುತ್ತಿರುವೆ. ನೀನು ಒಂದು ನಿರೀಕ್ಷೆಗೆ ಅಂಟಿಕೊಂಡಿರುವೆ, ಅಲ್ಲವೇ? ಇದರಿಂದ ನನಗೆ ಶೇಕಡಾ 100ರಷ್ಟು ಹೆಚ್ಚು ನೋವಾಗುತ್ತಿದೆ’ ಎಂದು ಹೇಳಿದ್ದಾರೆ. ನೇಹಾ ಅನ್ನು ವಾಪಸ್ ಕರೆದುಕೊಂಡು ಹೋಗಲು ಅವರ ಪೋಷಕರು ಬಂದಿದ್ದಾರೆ ಎಂದು ಮೋಹನ್​​ಲಾಲ್ ಹೇಳಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಕಲ್ಲಂಗಡಿ ಹಣ್ಣಿಗಾಗಿ ಕಿತ್ತಾಡಿದ ಸ್ಪರ್ಧಿಗಳು: ವಿಡಿಯೋ

ಇತ್ತೀಚಿನ ಸಂಚಿಕೆಯೊಂದರಲ್ಲಿ ನೇಹಾ ಸಹ ಸ್ಪರ್ಧಿ ತಾಶಿ ಅನ್ನು ತಾವು ಪ್ರೀತಿ ಮಾಡುತ್ತಿರುವುದಾಗಿ ಹೇಳಿದ್ದರು. ಪೋಷಕರು ಒಪ್ಪಿದರೆ ಮನೆಯಿಂದ ಹೊರಬಂದ ನಂತರ ತಾವು ತಮ್ಮ ಸಂಬಂಧವನ್ನು ಮುಂದುವರಿಸಲು ಬಯಸುವುದಾಗಿ ಅವರು ತಿಳಿಸಿದ್ದರು. ತಾಶಿ ವೇದಂಗಿ ಜತೆಗೆ ಸ್ನೇಹದಿಂದ ವರ್ತಿಸುತ್ತಿರುವುದನ್ನು ತಿಳಿದು ನೇಹಾ ಉದ್ವೇಗದಿಂದ ಪ್ರತಿಕ್ರಿಯಸಿದ್ದು ಅಲ್ಲದೆ ಪ್ರೇಮ ನಿವೇದನೆ ಮಾಡಿದ್ದರು. ಬಿಗ್​​ಬಾಸ್ ಕನ್ನಡದಲ್ಲೂ ಕೆಲವು ಜೋಡಿಗಳು ಆಗಿವೆ. ಯಶಸ್, ಆಸಿಯಾ, ಯಶಸ್, ಸೌಂದರ್ಯಾ, ತಾಂಡವ್, ಸೋನಿಕಾ ಹೀಗೆ ಬೇರೆ ಬೇರೆ ಜೋಡಿಗಳು ಬಿಗ್​​ಬಾಸ್ ಮನೆಯಲ್ಲಿ ಆಗಿವೆ. ಆದರೆ ಯಾರೂ ಸಹ ಎಲ್ಲೆ ಮೀರಿ ವರ್ತಿಸಿದ್ದಾಗಲಿ, ಮಾತನಾಡಿದ್ದಾಗಲಿ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language