Hashtagintro

ಮಿಂಚಿದ ಮಿಚೆಲ್: ಟೀಮ್ ಇಂಡಿಯಾಗೆ ಮೂರಂಕಿ ಗುರಿ

ಮಿಂಚಿದ ಮಿಚೆಲ್: ಟೀಮ್ ಇಂಡಿಯಾಗೆ ಮೂರಂಕಿ ಗುರಿ

ವೆಲ್ಲಿಂಗ್ಟನ್​ನ ಹೆನ್ರಿ ನಡೆಯುತ್ತಿರುವ ಭಾರತದ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 198 ರನ್ ಕಲೆಹಾಕಿದೆ. ಈ ಮೂಲಕ ಟೀಮ್ ಇಂಡಿಯಾಗೆ 199 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಇದಕ್ಕೂ ಮುನ್ನ  ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಟಿಮ್ ಸೈಫರ್ಡ್ ಕೇವಲ 2 ರನ್​ಗಳಿಸಿ ಅರ್ಷದೀಪ್ ಸಿಂಗ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಜೊತೆಗೂಡಿದ ಫಿನ್ ಅಲೆನ್ ಹಾಗೂ ಡ್ಯಾರಿಲ್ ಮಿಚೆಲ್ 2ನೇ ವಿಕೆಟ್​ಗೆ 86 ರನ್​ಗಳ ಜೊತೆಯಾಟವಾಡಿದರು.

ಈ ಹಂತದಲ್ಲಿ ದಾಳಿಗಿಳಿದಿ ನಿತೀಶ್ ಕುಮಾರ್ ರೆಡ್ಡಿ ಡೇಂಜರಸ್ ಫಿನ್ ಅಲೆನ್ (40 ರನ್, 25 ಎಸೆತ) ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದಾಗ್ಯೂ ಮೊದಲ 10 ಓವರ್​ಗಳಲ್ಲೇ ನ್ಯೂಝಿಲೆಂಡ್ ತಂಡ 100 ರನ್ ಕಲೆಹಾಕಿತು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ  ಡ್ಯಾರಿಲ್ ಮಿಚೆಲ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇತ್ತ ಮಿಚೆಲ್ ಜೊತೆ ಅಬ್ಬರಿಸಲಾರಂಭಿಸಿದ ಗ್ಲೆನ್ ಫಿಲಿಪ್ಸ್​ (17) ವಿಕೆಟ್ ಪಡೆಯುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು.

ಇದಾಗ್ಯೂ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ ಕಿವೀಸ್ ಪಡೆ 16 ಓವರ್​ಗಳ ಮುಕ್ತಾಯದ ವೇಳೆಗೆ 156 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಅಂದರೆ ಡೆತ್ ಓವರ್​ಗಳಿಗೂ ಮುನ್ನ ನ್ಯೂಝಿಲೆಂಡ್ ಬ್ಯಾಟರ್​ಗಳು ಪ್ರತಿ ಓವರ್​ಗೆ 9.75 ಸರಾಸರಿಯಲ್ಲಿ ರನ್ ಗಳಿಸಿದ್ದರು.

ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಡ್ಯಾರಿಲ್ ಮಿಚೆಲ್  52 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 89 ರನ್ ಬಾರಿಸಿದರೆ, ಉತ್ತಮ ಸಾಥ್ ನೀಡಿದ ಬೆವೊನ್ ಜೇಕಬ್ಸ್ 23 ಎಸೆತಗಳಲ್ಲಿ 39 ಸಿಡಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್​ ಕಲೆಹಾಕಿತು.

ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಪ್ರಿನ್ಸ್​ ಯಾದವ್.

ಇದನ್ನೂ ಓದಿ: ಕೇವಲ 1 ವಿಕೆಟ್​: ಇಂಡಿಯಾ ಎ ತಂಡದ ಗೆಲುವು ಕಸಿದ ‘ಬ್ಯಾಡ್ ಲೈಟ್’

ನ್ಯೂಝಿಲೆಂಡ್ (ಪ್ಲೇಯಿಂಗ್ XI): ಟಿಮ್ ಸೈಫರ್ಟ್(ವಿಕೆಟ್ ಕೀಪರ್), ಫಿನ್ ಅಲೆನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬೆವೊನ್ ಜೇಕಬ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮೀಸನ್, ಆ್ಯಡಂ ಮಿಲ್ನ್, ಜೇಕಬ್ ಡಫಿ, ಮ್ಯಾಥ್ಯೂ ಫಿಶರ್.

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language