ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಕೇರಳದ ಕೊಚ್ಚಿಯಲ್ಲಿರುವ ಗ್ರಾಂಡ್ ಹಯಾತ್ ಹೋಟೆಲ್ನಲ್ಲಿ ನಾಳೆ (ಅ.28) ಸಂಜೆ ನಡೆಯಲಿರುವ ಆಟಗಾರ್ತಿಯರ ಹರಾಜಿನಲ್ಲಿ ಒಟ್ಟು 146 ಮಹಿಳಾ ಕ್ರಿಕೆಟರ್ಗಳ ಹೆಸರು ಕಾಣಿಸಿಕೊಳ್ಳಲಿದೆ. (PC: Gettyimages)
ಈ 146 ಆಟಗಾರ್ತಿಯರಲ್ಲಿ ಮೊದಲ ಸೆಟ್ನಲ್ಲಿ 6 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಅಂದರೆ ಮೊದಲಿಗೆ ಈ ಆರು ಆಟಗಾರ್ತಿಯರಿಗಾಗಿ ಬಿಡ್ಡಿಂಗ್ ನಡೆಯಲಿದ್ದು, ಇದಾದ ಬಳಿಕ ಆಲ್ರೌಂಡರ್ಗಳು ಹಾಗೂ ವಿಕೆಟ್ ಕೀಪರ್ಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳಲಿರುವ 6 ಆಟಗಾರ್ತಿಯರ ಪಟ್ಟಿ ಇಲ್ಲಿದೆ… (PC: WPL)
ಸೋಫಿಯಾ ಡಂಕ್ಲಿ: ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಸೋಫಿಯಾ ಡಂಕ್ಲಿ ಈ ಬಾರಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಡಂಕ್ಲಿಯ ಹೆಸರು ಹರಾಜಿನ ಮೊದಲ ಪಟ್ಟಿಯಲ್ಲಿದೆ. (PC: Gettyimages)
ಗುಣಾಲನ್ ಕಮಲಿನಿ: ಭಾರತದ ಯುವ ಭರವಸೆಯ ಆಟಗಾರ್ತಿ ಗುಣಾಲನ್ ಕಮಿಲಿನಿ ಅವರು ಈ ಬಾರಿ 40 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕಮಲಿನಿ ಈ ಬಾರಿ ಹೊಸ ಟೀಮ್ ಪಾಲಾಗುವ ಸಾಧ್ಯತೆಯಿದೆ. (PC: Gettyimages)
ಗುಣಾಲನ್ ಕಮಲಿನಿ: ಭಾರತದ ಯುವ ಭರವಸೆಯ ಆಟಗಾರ್ತಿ ಗುಣಾಲನ್ ಕಮಿಲಿನಿ ಅವರು ಈ ಬಾರಿ 40 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕಮಲಿನಿ ಈ ಬಾರಿ ಹೊಸ ಟೀಮ್ ಪಾಲಾಗುವ ಸಾಧ್ಯತೆಯಿದೆ.
ರಾಘವಿ ಬಿಸ್ತ್: ಭಾರತದ ಯುವ ಬ್ಯಾಟರ್ ರಾಘವಿ ಬಿಸ್ತ್ ಕೂಡ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್ನಲ್ಲಿ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಬಿಸ್ತ್ ಅವರು ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. (PC: WPL)
ತೇಜಲ್ ಹಸಬ್ನಿಸ್: ಭಾರತೀಯ ಆಟಗಾರ್ತಿ ತೇಜಲ್ ಹಸಬ್ನಿಸ್ ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ತೇಜಲ್ ಈ ಬಾರಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (PC: GettyImages)
ಆಯುಷಿ ಸೋನಿ: ಭಾರತೀಯ ಬ್ಯಾಟರ್ ಆಯುಷಿ ಸೋನಿ ಕೂಡ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಸೀಸನ್ನಲ್ಲಿ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಆಯುಷಿ ಈ ಬಾರಿಯ ಹರಾಜು ಪಟ್ಟಿಯ ಸೆಟ್-1 ರಲ್ಲಿ ಸ್ಥಾನ ಪಡೆದಿದ್ದಾರೆ. (PC: WPL)
Source: TV9 Kannada Sports








