Hashtagintro

‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡಿದ್ದಕ್ಕೆ ಯಥರ್ವ್ ಬೇಸರ

‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡಿದ್ದಕ್ಕೆ ಯಥರ್ವ್ ಬೇಸರ

ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಈ ಚಿತ್ರದ ವರ್ಲ್ಡ್ ಪ್ರೀಮಿಯರ್ ಅದ್ಧೂರಿಯಾಗಿ ನೆರವೇರಿದ್ದು, ಪ್ರಸ್ತುತ ಚಿತ್ರತಂಡ ವಿಶ್ವದಾದ್ಯಂತ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ನಟ ಯಶ್ ಅವರು ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ವಹಿಸಿರುವುದಕ್ಕೆ ತಮ್ಮ ಮಗ ಯಥರ್ವ್ ಹೇಗೆ ಪ್ರತಿಕ್ರಿಯಿಸಿದ ಎಂಬುದನ್ನು ಹಂಚಿಕೊಂಡಿದ್ದಾರೆ.

ನಿರೂಪಕಿ ಸುಮಾ ಕನಕಾಲ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯಶ್, ತಾನು ರಾವಣನ ಪಾತ್ರ ಮಾಡುತ್ತಿರುವುದನ್ನು ಕೇಳಿ ಮಗ ಯಥರ್ವ್ ಬೇಸರ ಮಾಡಿಕೊಂಡಿದ್ದಾಗಿ ತಿಳಿಸಿದರು. ‘ಮಕ್ಕಳು ಅಜ್ಜ-ಅಜ್ಜಿಯಿಂದ ರಾಮಾಯಣ ಕಥೆ ಕೇಳಿ ಬೆಳೆದಿದ್ದಾರೆ. ಯಾವುದೇ ಮಗುವಿಗೆ ತಂದೆಯೇ ಹೀರೋ. ಕಥೆ ಗೊತ್ತಿದ್ದರಿಂದ ನನ್ನ ಮಗ, ‘ನೀವು ರಾವಣನಾ? ನೀವು ರಾವಣ ಹೇಗೆ ಆಗಲು ಸಾಧ್ಯ? ನೀವು ರಾಮನಲ್ಲವೇ?’ ಎಂದು ಪ್ರಶ್ನಿಸಿದ. ಆಗ ನಾನು ‘ನಿಜ ಜೀವನದಲ್ಲಿ ನಾನು ರಾಮನೇ, ಆದರೆ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದೇನೆ’ ಎಂದು ವಿವರಿಸಿದೆ. ಆದರೂ ಅವನು ‘ಹಾಗಾದರೆ ನೀವು ಕೆಟ್ಟವರಾ?’ ಎಂದು ಕೇಳಿದ. ನಂತರ ಅವನಿಗೆ ಸಿನಿಮಾ ಹಾಗೂ ನಟನೆಯ ಬಗ್ಗೆ ಅರ್ಥೈಸಬೇಕಾಯಿತು’ ಎಂದು ಯಶ್ ನೆನಪಿಸಿಕೊಂಡರು.

ಸಿನಿಮಾ ನೋಡುವಾಗ ಯಾರಿಗೆ ಬೆಂಬಲ ನೀಡಬೇಕು ಎಂಬ ಮಗನ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಾಗಿತ್ತು ಎಂದ ಯಶ್, ‘ನನ್ನ ಅಭಿಮಾನಿಗಳಿಗೂ ಇಂತಹ ಅನುಮಾನ ಬರಬಹುದು. ‘ಯಶ್ ಈ ಪಾತ್ರವನ್ನು ಏಕೆ ಮಾಡುತ್ತಿದ್ದಾರೆ?’ ಎಂದು. ವಿಶೇಷವಾಗಿ ಸೀತಾ ಅಪಹರಣದಂತಹ ದೃಶ್ಯಗಳಲ್ಲಿ ನನ್ನನ್ನು ಮೆಚ್ಚಲು ಸಾಧ್ಯವಿಲ್ಲ. ಆಗ ನಾನು ಮಗನಿಗೆ ಸ್ಪಷ್ಟವಾಗಿ ತಿಳಿಸಿದೆ: ‘ನಾವು ಕಥೆಯನ್ನು ಕೇಳುವಾಗ ಪ್ರತಿಯೊಬ್ಬರೂ ಶ್ರೀರಾಮನನ್ನೇ ಅನುಸರಿಸಬೇಕು. ರಾವಣ ಗ್ಲಾಮರಸ್, ಆಕರ್ಷಕ ಅಥವಾ ಶಕ್ತಿಶಾಲಿಯಾಗಿ ಕಾಣಿಸಬಹುದು, ಆದರೆ ಅಂತಿಮವಾಗಿ ಗೆಲುವು ಸಾಧಿಸಬೇಕಾದರೆ ಶ್ರೀರಾಮನ ತತ್ತ್ವಗಳನ್ನು ಅರ್ಥೈಸಿಕೊಳ್ಳಬೇಕು. ಆದರೆ ಸಿನಿಮಾದಲ್ಲಿ ನೀನು ನನಗೆ ಬೆಂಬಲ ನೀಡಬಹುದು, ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡ’ ಎಂದು ಹೇಳಿದೆ’ ಎಂದಿದ್ದಾರೆ.

ಇದನ್ನೂ ಓದಿ: ಪೈರಸಿಯಿಂದ ತಪ್ಪಿಸಿಕೊಳ್ಳಲು ರಿಲೀಸ್​​ಗೂ ಮೊದಲೇ ದೊಡ್ಡ ಶೀಲ್ಡ್ ಪಡೆದ ‘ರಾಮಾಯಣ’

ಅಷ್ಟೇ ಅಲ್ಲದೆ, ಸಿನಿಮಾದಲ್ಲಿ ನೀವು ಸೋಲುತ್ತೀರಾ ಅಥವಾ ಸಾಯುತ್ತೀರಾ ಎಂದು ಯಥರ್ವ್ ಕೇಳಿದಾಗ, ತಾವು ಕೇವಲ ಒಂದು ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ಯಶ್ ತಿಳಿಸಿದರು. ಚಿತ್ರೀಕರಣದ ಸಮಯದಲ್ಲಿ ಮಗನಿಂದ ಇಂತಹ ಪ್ರತಿಕ್ರಿಯೆ ಬರಬಹುದು ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಒಪ್ಪಿಕೊಂಡ ಯಶ್, ಅಭಿಮಾನಿಗಳ ಬಗ್ಗೆ ಯೋಚಿಸಿದ್ದರೂ ಮಗನ ಈ ಪ್ರಶ್ನೆ ತಮ್ಮನ್ನು ಅಚ್ಚರಿಗೊಳಿಸಿತು ಎಂದಿದ್ದಾರೆ. ಮಗ ಬೆಳೆಯುತ್ತಿದ್ದಂತೆ ನೈಜ ಜೀವನಕ್ಕೂ ಸಿನಿಮಾದ ಪಾತ್ರಕ್ಕೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬ ಭರವಸೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language