Hashtagintro

‘ರಾಮಾಯಣ’ ಚಿತ್ರದ ಗಳಿಕೆ ಸೋಮವಾರ ಏಕಾಏಕಿ ಏರಿದ್ದೇಕೆ? ಇಲ್ಲಿದೆ ಅಸಲಿ ಕಾರಣ

‘ರಾಮಾಯಣ’ ಚಿತ್ರದ ಗಳಿಕೆ ಸೋಮವಾರ ಏಕಾಏಕಿ ಏರಿದ್ದೇಕೆ? ಇಲ್ಲಿದೆ ಅಸಲಿ ಕಾರಣ

ವಿಶ್ವಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂತನ ಇತಿಹಾಸ ನಿರ್ಮಿಸಿದೆ. ಬಿಡುಗಡೆಯಾದ ಮೊದಲ ವಾರಾಂತ್ಯಕ್ಕಿಂತಲೂ, ಮೊದಲ ಸೋಮವಾರದಂದು ಸಿನಿಮಾ ಗಳಿಸಿದ ಮೊತ್ತ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಸಾಮಾನ್ಯವಾಗಿ ವಾರದ ಮೊದಲ ದಿನವಾದ ಸೋಮವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವುದು ಸಹಜ. ಆದರೆ ‘ರಾಮಾಯಣ’ ಚಿತ್ರಕ್ಕೆ ಇದು ಸಂಪೂರ್ಣ ಉಲ್ಟಾ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಮೊದಲ ಸೋಮವಾರ ಈ ಸಿನಿಮಾ ಭಾರತದಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 107.50 ಕೋಟಿ ರೂಪಾಯಿ. ಹೊರ ದೇಶಗಳಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾದ ಐದನೇ ದಿನದ ಗಳಿಕೆ 130 ಕೋಟಿ ರೂಪಾಯಿ ದಾಟಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 663 ಕೋಟಿ ರೂಪಾಯಿ ಆಗಿದೆ. ಈ ಜಿಗಿತಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.

ರಜಾ ದಿನ

ದೀಪಾವಳಿ ಹಬ್ಬದ ಆರಂಭದ ದಿನಗಳಲ್ಲಿ ಜನರು ಪೂಜೆ, ಖರೀದಿ ಹಾಗೂ ಕುಟುಂಬದ ಸಂಭ್ರಮಗಳಲ್ಲಿ ನಿರತರಾಗಿದ್ದರಿಂದ ಚಿತ್ರಮಂದಿರಗಳತ್ತ ಪ್ರೇಕ್ಷಕರು ಬಂದಿರಲಿಲ್ಲ. ಆದರೆ, ಸೋಮವಾರ ದೀಪಾವಳಿ ನಂತರದ ಪ್ರಮುಖ ರಜಾದಿನವಾಗಿದ್ದರಿಂದ, ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳು ಹಾಗೂ ಯುವಜನತೆ ಒಟ್ಟಾಗಿ ಚಿತ್ರಮಂದಿರಗಳಿಗೆ ಆಗಮಿಸಿದರು.

ಉತ್ತರ ಭಾರತದ ಎಫೆಕ್ಟ್

ಮೊದಲ 4 ದಿನಗಳ ಕಾಲ ಉತ್ತರ ಭಾರತದ ದೆಹಲಿ-ಯುಪಿ, ಈಸ್ಟ್ ಪಂಜಾಬ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ಪ್ರಮುಖ ಚಿತ್ರ ಮಾರುಕಟ್ಟೆಗಳಲ್ಲಿ ಲಕ್ಷ್ಮೀ ಪೂಜೆಯ ಕಾರಣದಿಂದ ಗಳಿಕೆ ಸಾಧಾರಣವಾಗಿತ್ತು. ಆದರೆ ಸೋಮವಾರ ಈ ಮಾರುಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡವು. ದೆಹಲಿ-ಯುಪಿ ವಲಯ ಒಂದರಲ್ಲೇ ಭಾನುವಾರ ಕೇವಲ 3.50 ಕೋಟಿ ಗಳಿಸಿದ್ದ ಈ ಸಿನಿಮಾ, ಸೋಮವಾರ ಒಂದೇ ದಿನ ಸುಮಾರು 20 ಕೋಟಿ ಬಾಚಿಕೊಂಡು ಅಚ್ಚರಿ ಮೂಡಿಸಿದೆ.

ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಇತಿಹಾಸ

ಸಿನಿಮಾಗೆ ಸಿಕ್ಕ ಅತ್ಯುತ್ತಮ ಸಕಾರಾತ್ಮಕ ಪ್ರತಿಕ್ರಿಯೆಗಳು ಹಾಗೂ ಅದ್ಭುತ ಗ್ರಾಫಿಕ್ಸ್ ವಿಮರ್ಶೆಗಳಿಂದಾಗಿ ಸೋಮವಾರ ಕುಟುಂಬ ಸಮೇತ ವೀಕ್ಷಿಸುವವರ ಸಂಖ್ಯೆ ಹೆಚ್ಚಾಯಿತು. ಪ್ರಮುಖ ಟಿಕೆಟ್ ಬುಕಿಂಗ್ ವೇದಿಕೆ ‘ಬುಕ್‌ಮೈಶೋ’ನಲ್ಲಿ ಸೋಮವಾರ ಒಂದೇ ಗಂಟೆಯಲ್ಲಿ 1.39 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ವಾರದ ದಿನವೊಂದರಲ್ಲಿ ಈ ಮಟ್ಟದ ಬುಕಿಂಗ್ ಕಂಡ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಕಲೆಕ್ಷನ್: 5 ದಿನಕ್ಕೆ 663 ಕೋಟಿ ರೂಪಾಯಿ ಗಳಿಸಿದ ಚಿತ್ರ

ವಿದೇಶಗಳಲ್ಲೂ ‘ರಾಮಾಯಣ’ ಹವಾ:

ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಿ ಬಾಕ್ಸ್ ಆಫೀಸ್‌ನಲ್ಲೂ ಚಿತ್ರದ ಗಳಿಕೆ ಕಲ್ಪನೆಗೂ ಮೀರಿದ್ದಾಗಿದೆ. ಸಾಂಪ್ರದಾಯಿಕವಾಗಿ ಸೋಮವಾರ ವಿದೇಶಗಳಲ್ಲಿ ಭಾರತೀಯ సినిಮಾಗಳ ಗಳಿಕೆ ತಗ್ಗುತ್ತದೆ. ಆದರೆ ರಾಮಾಯಣ ಸಿನಿಮಾ ಸೋಮವಾರ ಒಂದೇ ದಿನ ವಿದೇಶದಿಂದ ಬರೋಬ್ಬರಿ 25 ಕೋಟಿ ಸಂಗ್ರಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language