Hashtagintro

ಟ್ರೋಲ್, ಅಪಪ್ರಚಾರದ ವಿರುದ್ಧ ಸೈಬರ್ ಠಾಣೆ ಮೆಟ್ಟಿಲೇರಿದ ರಶ್ಮಿಕಾ, ವಿಜಯ್ ದೇವರಕೊಂಡ

ಟ್ರೋಲ್, ಅಪಪ್ರಚಾರದ ವಿರುದ್ಧ ಸೈಬರ್ ಠಾಣೆ ಮೆಟ್ಟಿಲೇರಿದ ರಶ್ಮಿಕಾ, ವಿಜಯ್ ದೇವರಕೊಂಡ

‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗವಹಿಸಿದ ಬಳಿಕ ತೀವ್ರ ಟ್ರೋಲ್ ದಾಳಿ ಹಾಗೂ ಅಪಪ್ರಚಾರದ ಕಾಟ ಎದುರಿಸುತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಪರ ಅವರ ಲೀಗಲ್ ಟೀಮ್ ಈಗ ಕಾನೂನು ಸಮರಕ್ಕಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟ-ನಟಿಯ ವಿರುದ್ಧ ಸೃಷ್ಟಿಸಲಾಗುತ್ತಿರುವ ನಕಲಿ ಸಂದೇಶಗಳು, ಎಡಿಟ್ ಮಾಡಿದ ಸ್ಕ್ರೀನ್‌ಶಾಟ್‌ಗಳು ಹಾಗೂ ನಿಂದನಾತ್ಮಕ ಪೋಸ್ಟ್‌ಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಲಾಗಿದೆ.

ರಶ್ಮಿಕಾ ಮತ್ತು ವಿಜಯ್ ಅವರ ಲೀಗಲ್ ತಂಡದ ಪ್ರತಿನಿಧಿಯೊಬ್ಬರು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಖುದ್ದಾಗಿ ತೆರಳಿ ದೂರು ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಮರ್ಶೆಯ ಹೆಸರಿನಲ್ಲಿ ನಡೆಯುತ್ತಿರುವ ವೈಯಕ್ತಿಕ ದಾಳಿ, ವ್ಯಕ್ತಿತ್ವ ಹರಣ, ಸೈಬರ್ ಬುಲ್ಲಿಯಿಂಗ್ ಮತ್ತು ಸುಳ್ಳು ಮಾಹಿತಿಗಳ ಪ್ರಸಾರದ ಕುರಿತು ದೂರಿನಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ಟ್ರೋಲ್ ಮಾಡುತ್ತಿರುವ ಹಲವಾರು ಲಿಂಕ್‌ಗಳು ಮತ್ತು ಸೂಕ್ತ ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿರೋಶ್ ತಂಡ, ‘ನಾವು ಪ್ರತಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯ, ವೈಯಕ್ತಿಕ ಅಭಿಪ್ರಾಯ ಹಾಗೂ ವಿಮರ್ಶೆಯನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಆದರೆ ತಮ್ಮ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೂ ಮತ್ತು ನಕಲಿ ಹಾಗೂ ಎಡಿಟ್ ಮಾಡಿದ ಸುಳ್ಳು ಸುದ್ದಿಗಳನ್ನು ಸತ್ಯವೆಂಬಂತೆ ಬಿಂಬಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಈ ಎರಡನ್ನೂ ಒಂದೇ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಈ ಟ್ರೋಲ್ ದಾಳಿಯ ಹಿಂದೆ ಯಾರಾದರೂ ಶತ್ರುಗಳು ಹಣ ನೀಡಿ ಕ್ಯಾಂಪೇನ್ ನಡೆಸುತ್ತಿದ್ದಾರೆಯೇ ಎಂಬ ಕೋನದಲ್ಲೂ ತನಿಖೆ ನಡೆಸುವಂತೆ ಸೈಬರ್ ಪೊಲೀಸರಿಗೆ ಮನವಿ ಮಾಡಲಾಗಿದೆ. ಸುಳ್ಳು ಸುದ್ದಿಗಳನ್ನು ಸೃಷ್ಟಿಸುವವರು, ಅದನ್ನು ಮರು-ಹಂಚಿಕೊಳ್ಳುವವರು ಹಾಗೂ ಅಪಪ್ರಚಾರ ಮಾಡುವ ಪ್ರತಿಯೊಬ್ಬರ ವಿರುದ್ಧವೂ ಪ್ರತ್ಯೇಕವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಂಡ ಎಚ್ಚರಿಸಿದೆ.

ಇದನ್ನೂ ಓದಿ: ರಶ್ಮಿಕಾ ಬಗ್ಗೆ ಜಾವೇದ್ ಟ್ವೀಟ್: ಉದ್ದೇಶ ಒಳ್ಳೆಯದು ಆದರೆ ಮಾಹಿತಿ ತಪ್ಪು

‘ನಮ್ಮ ದೂರು ಜನರ ವಿಮರ್ಶೆಯನ್ನು ತಡೆಯುವುದಕ್ಕಾಗಿ ಅಲ್ಲ. ಬದಲಾಗಿ ಸತ್ಯಕ್ಕೆ ದೂರವಾದ ನಕಲಿ ವಿಚಾರಗಳನ್ನು ನಿಜವೆಂಬಂತೆ ಬಿಂಬಿಸಿ ನಟರ ಗೌರವಕ್ಕೆ ಧಕ್ಕೆ ತರುವುದನ್ನು ತಡೆಯುವುದಕ್ಕಾಗಿ. ಸಾರ್ವಜನಿಕರು ಹಾಗೂ ಅಭಿಮಾನಿಗಳು ಯಾವುದೇ ಆಧಾರವಿಲ್ಲದ ಊಹಾಪೋಹಗಳನ್ನು ಹಂಚಿಕೊಳ್ಳಬೇಡಿ’ ಎಂದು ವಿರೋಶ್ ಟೀಮ್ ಮನವಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language