Hashtagintro

‘ದೀಪಾವಳಿಗೆ ಪಟಾಕಿ ಹಚ್ಚಬೇಡಿ’: ಜನರಿಗೆ ಬುದ್ಧಿ ಹೇಳಿ ಟ್ರೋಲ್ ಆದ ಸುನೀತಾ ಅಹುಜಾ

‘ದೀಪಾವಳಿಗೆ ಪಟಾಕಿ ಹಚ್ಚಬೇಡಿ’: ಜನರಿಗೆ ಬುದ್ಧಿ ಹೇಳಿ ಟ್ರೋಲ್ ಆದ ಸುನೀತಾ ಅಹುಜಾ

ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾದಲ್ಲಿ ನೀಡುವ ಕೆಲವು ಹೇಳಿಕೆಗಳು ಕೆಲವೊಮ್ಮೆ ಅವರನ್ನೇ ಮುಜುಗರಕ್ಕೆ ಈಡುಮಾಡುತ್ತವೆ. ಬಾಲಿವುಡ್‌ನ ಖ್ಯಾತ ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರ ವಿಚಾರದಲ್ಲೂ ಈಗ ಇದೇ ನಡೆದಿದೆ. ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ಸಾರ್ವಜನಿಕರಿಗೆ ‘ಪಟಾಕಿ ಮುಕ್ತ ದೀಪಾವಳಿ ಆಚರಿಸಿ’ ಎಂದು ಸಾಮಾಜಿಕ ಕಳಕಳಿಯ ಸಂದೇಶ ನೀಡಲು ಹೋಗಿ, ನೆಟ್ಟಿಗರಿಂದ ಅವರು ತೀವ್ರವಾಗಿ ಟ್ರೋಲ್ ಆಗಿದ್ದಾರೆ.

ಮಂಗಳವಾರ (ಅಕ್ಟೋಬರ್ 3) ಮುಂಬೈ ವಿಮಾನ ನಿಲ್ದಾಣದ ಹೊರಗೆ ತಮ್ಮ ಪ್ರೀತಿಯ ಸಾಕು ನಾಯಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾಪರಾಜಿಗಳ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದ ಸುನೀತಾ, ಮಾಧ್ಯಮಗಳ ಮುಂದೆ ದೀಪಾವಳಿ ಕುರಿತು ಮಾತನಾಡಿದರು. ‘ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ, ಈ ದೀಪಾವಳಿಗೆ ದಯವಿಟ್ಟು ಯಾರೂ ಪಟಾಕಿಗಳನ್ನು ಹಚ್ಚಬೇಡಿ’ ಎಂದು ಅವರು ಹೇಳಿದರು.

‘ಪಟಾಕಿ ಸದ್ದಿನಿಂದ ಸಾಕು ನಾಯಿಗಳು ಮತ್ತು ಪ್ರಾಣಿಗಳು ತೀವ್ರವಾಗಿ ಹೆದರುತ್ತವೆ. ಮನೆಯಲ್ಲಿರುವ ವಯಸ್ಸಾದವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವ ರೋಗಿಗಳಿಗೆ ಪಟಾಕಿ ಹೊಗೆ ಮತ್ತು ಸದ್ದು ತುಂಬಾ ತೊಂದರೆ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೀಪಾವಳಿಯನ್ನು ನಕ್ಕು-ನಲಿದು ಆಚರಿಸಿ, ಆದರೆ ಪ್ರಾಣಿಗಳಿಗೆ ಭಯ ಹುಟ್ಟಿಸುವ ಪಟಾಕಿಗಳನ್ನು ಹಚ್ಚಬೇಡಿ. ಈ ಮೂಖ ಪ್ರಾಣಿಗಳಿಗೆ ತಮ್ಮ ನೋವನ್ನು ಹೇಳಿಕೊಳ್ಳಲು ಬರುವುದಿಲ್ಲ’ ಎಂದು ಸುನೀತಾ ಅಹುಜಾ ಅವರು ಮನವಿ ಮಾಡಿದ್ದರು.

 

View this post on Instagram

 

A post shared by Viral Bhayani (@viralbhayani)

ಸುನೀತಾ ಅವರು ಪ್ರಾಣಿಗಳ ಪರವಾಗಿ ಉಚಿತ ಸಲಹೆ ನೀಡಿರುವುದು ನೆಟ್ಟಿಗರಿಗೆ ಸಹಿಸಲಾಗಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುನೀತಾ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, ‘ದಯವಿಟ್ಟು ಉಚಿತ ಜ್ಞಾನ ಹಂಚಬೇಡಿ. ನಾಯಿಗಳಿಗೆ ಮಾತ್ರ ಪ್ರಾಣಿ ಎಂಬ ಅನುಕಂಪವೇ? ನೀವು ದಿನವೂ ತಿನ್ನುವ ಕೋಳಿ, ಆಡು ಮತ್ತು ಮೀನುಗಳು ಪ್ರಾಣಿಗಳಲ್ಲವೇ? ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾರ್ಟಿಗಳಲ್ಲಿ ಪಟಾಕಿ ಹಚ್ಚಿದಾಗ ಪ್ರಾಣಿಗಳಿಗೆ ತೊಂದರೆಯಾಗುವುದಿಲ್ಲವೇ’ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಮೋಸ ಮಾಡಿದ ಆರೋಪ: ‘ಯಾರೋ ಆಕೆಯ ದಾರಿ ತಪ್ಪಿಸಿದ್ದಾರೆ’ ಎಂದ ನಟ ಗೋವಿಂದ

ಇನ್ನು ಕೆಲವು ನೆಟ್ಟಿಗರು ಸುನೀತಾ ಮತ್ತು ಗೋವಿಂದ ನಡುವಿನ ವೈಯಕ್ತಿಕ ದಾಂಪತ್ಯ ವಿಚಾರವನ್ನೂ ಎಳೆದು ತಂದು ಕಾಲೆಳೆದಿದ್ದಾರೆ. ‘ನಿಮಗೆ ಪ್ರಾಣಿಗಳ ಬಗ್ಗೆ ಇರುವ ಕಾಳಜಿ, ಗಂಡ ಗೋವಿಂದ ಅವರ ಮೇಲೆ ಇಲ್ಲವಲ್ಲ’, ‘ಗೋವಿಂದ ನಿಮ್ಮನ್ನು ದೂರವಿಟ್ಟು ಒಳ್ಳೆಯ ಕೆಲಸ ಮಾಡಿದರು’ ಎಂದೆಲ್ಲಾ ಕಟುವಾಗಿ ಕಮೆಂಟ್ ಮಾಡಿದ್ದಾರೆ. ಈ ರೀತಿಯ ಕಮೆಂಟ್​ಗಳು ವೈರಲ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language