
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಕಿರಣ್ ಶಾಸ್ತ್ರಿ ಆಟದ ಬಗ್ಗೆ ಹಲವರಿಗೆ ತಕರಾರು ಇದೆ. ಈಗಾಗಲೇ ಅನೇಕ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದುಂಟು. ಹೊಸ ಸಂಚಿಕೆಯಲ್ಲಿ ಗಾನವಿ ಮತ್ತು ತಾಂಡವ್ ರಾಮ್ ಕೂಡ ಕಿರಣ್ ಶಾಸ್ತ್ರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ಕುತಂತ್ರ ಮಾಡುವ ನಿನಗೇ ಇಷ್ಟು ಇರಬೇಕಾದರೆ ನ್ಯಾಯವಾಗಿ ಬದುಕುವ ನಮಗೆ ಇಷ್ಟು ಇರಬೇಕು’ ಎಂದು ತಾಂಡವ್ ರಾಮ್ ಅವರು ಗರಂ ಆಗಿ ಹೇಳಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿ ಉದ್ಧಟತನ ತೋರಲು ಕಿರಣ್ ಶಾಸ್ತ್ರಿ ಪ್ರಯತ್ನಿಸಿದ್ದಾರೆ. ಅದರಿಂದ ತಾಂಡವ್ ರಾಮ್ ಅವರಿಗೆ ಸಖತ್ ಕೋಪ ಬಂದಿದೆ. ‘ಕಳ್ಳ ನೀನು.. ಎದೆ ಮೇಲೆ ಕಾಲಿಟ್ಟುಬಿಡುತ್ತೇನೆ’ ಎಂದು ಅವರು ಗುಡುಗಿದ್ದಾರೆ. ಅವರನ್ನು ಜಗದೀಶ್ ತಡೆದಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿರುವ ನವೆಂಬರ್ 3ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
