Hashtagintro

ಬಸ್, ರೈಲಿನಂತೆ ವಿಮಾನದಲ್ಲೂ ‘ಹಾರ್ನ್’ ಇದೆಯಾ? ಯಾರಿಗೂ ಗೊತ್ತಿರದ ಏರ್‌ಲೈನ್ಸ್‌ಗಳ ಆಸಕ್ತಿಕರ ವಿಷಯ

ಬಸ್, ರೈಲಿನಂತೆ ವಿಮಾನದಲ್ಲೂ ‘ಹಾರ್ನ್’ ಇದೆಯಾ? ಯಾರಿಗೂ ಗೊತ್ತಿರದ ಏರ್‌ಲೈನ್ಸ್‌ಗಳ ಆಸಕ್ತಿಕರ ವಿಷಯ

ಬೆಂಗಳೂರು, ನ.3: ರಸ್ತೆಗಳಲ್ಲಿ ಚಲಿಸುವ ಬಸ್, ಕಾರ್‌ಗಳು ಅಥವಾ ಹಳಿಗಳ ಮೇಲೆ ಓಡುವ ರೈಲುಗಳಲ್ಲಿ ಇತರರಿಗೆ ಎಚ್ಚರಿಕೆ ನೀಡಲು ಅಥವಾ ದಾರಿ ಕೇಳಲು ಹಾರ್ನ್ (Horn) ಇರುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಆಕಾಶದಲ್ಲಿ ಹಾರುವ ವಿಮಾನಗಳಲ್ಲೂ ಹಾರ್ನ್ ಇದೆಯೇ? ಎಂಬ ಕುತೂಹಲಕಾರಿ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಈ ಬಗ್ಗೆ ಹಲವು ವೆಬ್​​​ ಸೈಟ್​​ಗಳು ಹಾಗೂ ಗೂಗಲ್​​ ಕೂಡ ವರದಿಯನ್ನು ಮಾಡಿದೆ.

ಹೌದು, ವಿಮಾನಗಳಲ್ಲೂ ಹಾರ್ನ್ ಇರುತ್ತದೆ. ಆದರೆ, ಈ ಹಾರ್ನ್ ಕಾರ್ಯನಿರ್ವಹಿಸುವ ವಿಧಾನ ಮತ್ತು ಅದರ ಉದ್ದೇಶ ಮಾತ್ರ ಬಸ್ ಅಥವಾ ರೈಲುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ವಿಮಾನದಲ್ಲಿ ಹಾರ್ನ್ ಏಕಿದೆ, ಅದನ್ನು ಯಾವಾಗ ಮತ್ತು ಯಾರು ಬಳಸುತ್ತಾರೆ ಎಂಬ ಸಂಪೂರ್ಣ ವಿಸ್ತೃತ ವಿವರ ಇಲ್ಲಿದೆ

ವಿಮಾನದ ಹಾರ್ನ್ ಹಾರಾಟದ ವೇಳೆ ಸದ್ದು ಮಾಡುವುದಿಲ್ಲ

ಕಾರು ಅಥವಾ ಬಸ್‌ಗಳಲ್ಲಿ ಹಾರ್ನ್ ಒತ್ತುವಂತೆ ಪೈಲಟ್‌ಗಳು ಆಕಾಶದಲ್ಲಿ ಹಾರಾಟ ನಡೆಸುವಾಗ ಅಥವಾ ಇತರ ವಿಮಾನಗಳು ಎದುರಾದಾಗ ಹಾರ್ನ್ ಶಬ್ದ ಮಾಡುವುದಿಲ್ಲ. ಆಕಾಶದಲ್ಲಿ ವಿಮಾನಗಳ ನಡುವೆ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಹಾಗೂ ಸಂವಹನ ನಡೆಸಲು ಅತ್ಯಾಧುನಿಕ ರೇಡಾರ್, ಎಟಿಎಸ್‌ (Air Traffic Control) ಹಾಗೂ ಟಿಸಿಎಎಸ್ (Traffic Collision Avoidance System) ನಂತಹ ತಂತ್ರಜ್ಞಾನಗಳಿರುತ್ತವೆ.

ವಿಮಾನದ ಹಾರ್ನ್ ಎಲ್ಲಿದೆ? ಅದರ ಸದ್ದು ಹೇಗಿರುತ್ತದೆ?

ವಿಮಾನದ ಹಾರ್ನ್ ಅನ್ನು ‘ಗ್ರೌಂಡ್ ಕಾಲ್ ಹಾರ್ನ್’ ಅಥವಾ ಕ್ಲಾಕ್ಸನ್ ಎಂದು ಕರೆಯಲಾಗುತ್ತದೆ. ಇದು ವಿಮಾನದ ಕಾಕ್‌ಪಿಟ್ (ಪೈಲಟ್ ಕೊಠಡಿ) ಒಳಗೆ ಇರುವುದಿಲ್ಲ. ಬದಲಿಗೆ ವಿಮಾನದ ಮುಂಭಾಗದ ಚಕ್ರಗಳು ಇರುವ ಜಾಗದ ಹತ್ತಿರ ಅಳವಡಿಸಲಾಗಿರುತ್ತದೆ. ಇದರ ಸದ್ದು ಬಸ್ ಅಥವಾ ಕಾರಿನ ಹಾರ್ನ್‌ನಂತಿರುವುದಿಲ್ಲ. ಹಳೆಯ ಕಾಲದ ಸೈರನ್, ಸ್ಟೀಮ್ ಬೋಟ್ ಅಥವಾ ರಿಂಗ್ ಟೋನ್ ಮಾದರಿಯ ತೀವ್ರವಾದ ಹೈ-ಫ್ರೀಕ್ವೆನ್ಸಿ ಧ್ವನಿಯಲ್ಲಿ ಕೇಳಿಸುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಕೆಎಸ್​​​ಆರ್​​ಟಿಸಿ ಗುಡ್​​ ನ್ಯೂಸ್: ಬೆಂಗಳೂರಿನಿಂದ 2,600 ಹೆಚ್ಚುವರಿ ವಿಶೇಷ ಬಸ್

ಹಾರ್ನ್ ಅನ್ನು ಯಾವಾಗ ಮತ್ತು ಯಾವುದಕ್ಕೆ ಬಳಸುತ್ತಾರೆ?

ವಿಮಾನಯಾನ ರಂಗದಲ್ಲಿ ಈ ಹಾರ್ನ್ ಅನ್ನು ಪ್ರಮುಖವಾಗಿ 3 ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಒಂದು ವಿಮಾನವು ರನ್‌ವೇ ಅಥವಾ ಏರ್‌ಪೋರ್ಟ್‌ನ ಬೇ ನಲ್ಲಿ ನಿಂತಿರುವಾಗ, ಕಾಕ್‌ಪಿಟ್‌ನಲ್ಲಿರುವ ಪೈಲಟ್ ಅಥವಾ ಎಂಜಿನಿಯರ್‌ಗಳು ಕೆಳಗೆ ನೆಲದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗ್ರೌಂಡ್ ಸ್ಟಾಫ್ ಅಥವಾ ಟೆಕ್ನಿಷಿಯನ್ನರ ಗಮನ ಸೆಳೆಯಲು ಕಾಕ್‌ಪಿಟ್‌ನ ಕಂಟ್ರೋಲ್ ಪ್ಯಾನೆಲ್‌ನಲ್ಲಿರುವ GND (Ground Call) ಬಟನ್ ಒತ್ತುತ್ತಾರೆ. ಆಗ ವಿಮಾನದ ಕೆಳಭಾಗದಲ್ಲಿ ಹಾರ್ನ್ ಸದ್ದು ಮಾಡುತ್ತದೆ.
ಹಾರ್ನ್ ಸದ್ದು ಕೇಳಿದ ತಕ್ಷಣ ಗ್ರೌಂಡ್ ಸಿಬ್ಬಂದಿಯು ವಿಮಾನದ ಮುಂಭಾಗದ ಚಕ್ರದ ಬಳಿ ಇರುವ ಜ್ಯಾಕ್‌ಗೆ ತಮ್ಮ ಹೆಡ್‌ಫೋನ್ ಪ್ಲಗ್ ಮಾಡಿ ಪೈಲಟ್ ಜೊತೆ ನೇರವಾಗಿ ಮಾತನಾಡಬಹುದು.
ವಿಮಾನವು ಗ್ರೌಂಡ್‌ನಲ್ಲಿದ್ದಾಗ ಅದರ ಎಲೆಕ್ಟ್ರಾನಿಕ್ ಉಪಕರಣಗಳ ಕೊಠಡಿ ಅತಿಯಾಗಿ ಕಾಯ್ದುಕೊಂಡರೆ, ಸಾಕೆಟ್ ಸಿಡಿದರೆ ಅಥವಾ ತಾಂತ್ರಿಕ ದೋಷ ಕಂಡುಬಂದರೆ ಈ ಹಾರ್ನ್ ತಾನಾಗಿಯೇ ಸದ್ದು ಮಾಡಿ ಸ್ವಯಂಚಾಲಿತವಾಗಿ ಎಚ್ಚರಿಕೆ ನೀಡುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language